ಸಾಕ್ಷರ ಸನ್ಮಾನ

Instructor: ANSSIRDPRLanguage: Kannada

About the course

ಕರ್ನಾಟಕದಲ್ಲಿ ಗ್ರಾಮೀಣಾಭಿವೃದ್ಧಿ ಚಟುವಟಿಕೆಗಳು ಅರ್ಥಪೂರ್ಣವಾಗಿ ಸಾಗುತ್ತಲಿವೆ. ಇದರಲ್ಲಿ
ಭಾಗಿಗಳಾಗಿರುವ ಜನಪ್ರತಿನಿಧಿಗಳು ಅಭಿವೃದ್ದಿ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿರುವುದು ಹೆಮ್ಮೆಯ ಸಂಗತಿ. ಆದರೂ
ಇವರುಗಳಲ್ಲಿ ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿರುವ ಕೆಲವು ಸದಸ್ಯರಲ್ಲಿ ಸಾಕ್ಷರರಾಗಿಲ್ಲದಿರುವುದು ಕಂಡುಬಂದಿದೆ.
ಇದು ಅಭಿವೃದ್ಧಿಗೆ ತೊಡಕಾಗಬಾರದು. ಈ ಆಶಯಗಳೊಂದಿಗೆ ಕಲಿಕೆಗೆ ಆಸಕ್ತಿ ತೋರುವ ಪಂಚಾಯಿತಿ ಸದಸ್ಯರನ್ನು
ಗುರುತಿಸಿ ಸಾಕ್ಷರರನ್ನಾಗಿ ಮಾಡಲು ಯೋಜನೆಯನ್ನು ರೂಪಿಸಲಾಗಿದೆ. 'ಸಾಕ್ಷರ ಸನ್ಮಾನ' ಎಂಬ ಯೋಜನೆಯ
ಮೂಲಕ ಅನಕ್ಷರಸ್ಥ ಸದಸ್ಯರನ್ನು ಸಂಪೂರ್ಣ ಸಾಕ್ಷರರನ್ನಾಗಿ ಮಾಡುವ ಪ್ರಯತ್ನಕ್ಕೆ ನಮ್ಮ ಸಂಸ್ಥೆಯು ಮುಂದಾಗಿದೆ.
ಇದಕ್ಕಾಗಿ ಲೋಕ ಶಿಕ್ಷಣ ನಿರ್ದೇಶನಾಲಯವು ಸಿದ್ಧಪಡಿಸಿರುವ 'ಸಾಕ್ಷರ ಸಂದೇಶ' ಎಂಬ ಪ್ರಾಥಮಿಕೆಯನ್ನು
ಬಳಸಿಕೊಳ್ಳಲಾಗುತ್ತಿದೆ. ಈ ಪ್ರಾಥಮಿಕೆಯನ್ನು ಬಳಸಿಕೊಂಡು ಒಬ್ಬರಿಗೆ ಒಬ್ಬರು ಕಲಿಸುವಂತೆ ಕಾರ್ಯಕ್ರಮವನ್ನು
ವಿನ್ಯಾಸ ಮಾಡಲಾಗಿದ್ದು, ಆಯ್ದ ಪರಿಣಿತರನ್ನು ಗುರುತಿಸಿ ಅವರಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಕಲಿಕೆ ಮತ್ತು
ಬೋಧನೆಗಳು ಆಸಕ್ತಿದಾಯಕವಾಗಿ ಮಾಡಲು ಬೋಧನ ವಿಧಾನವನ್ನು ಕುರಿತು ವೀಡಿಯೋಪಾಠ ಸರಣಿಯನ್ನು
ಸಹ ಸಿದ್ಧಪಡಿಸಲಾಗಿದೆ. ಇವುಗಳಿಂದ ಕಲಿಕಾರ್ಥಿಗಳು ಓದು, ಬರಹ, ಲೆಕ್ಕಾಚಾರದಲ್ಲಿ ಸ್ವಾವಲಂಬಿಗಳಾಗುವರು
ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

Syllabus

ANSSIRD

Join an exclusive members-only community, get high-quality structured courses, memberships, and much more.

Launch your GraphyLaunch your Graphy
100K+ creators trust Graphy to teach online
𝕏
eSAT, ANSSIRD & PR, Mysuru 2024 Privacy policy Terms of use Contact us Refund policy